Friday, September 24, 2010

Yava mohana muraLi kareyitho

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ 
ಯಾವ ಬೃಂದಾವನವು ಸೆಳೆಯಿತೋ ನಿನ್ನ ಮಣ್ಣಿನ ಕಣ್ಣನು
ಯಾವ ಬೃಂದಾವನವು ಚಾಚಿತೋ ತನ್ನ ಮಿಂಚಿನ ಕಯ್ಯನು 

ಹೂವು ಹಾಸಿಗೆ ಚಂದ್ರ ಚಂದನ, ಬಾಹು ಬಂಧನ, ಚುಂಬನ
ಬಯಕೆ ತೋಟದ ಬೇಲಿಯೊಳಗೆ, ಕರಣ ಗಣದೀ ರಿಂಗಣಾ

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಮುಲೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ

ವಿವಶವಾಯಿತು ಪ್ರಾಣ: ಪರವಶವು ನಿನ್ನೀ ಚೇತನ 
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...

ರಚನೆ : ಗೋಪಾಲ ಕೃಷ್ಣ ಅಡಿಗ 

4 comments:

ಕನಸು.. said...

ಕನ್ನಡ ಪ್ರೀತಿ ಹೀಗೆ ಇರಲಿ.. ಒಂದೇ ವಿನಂತಿ: ದಯವಿಟ್ಟು ಕಾವ್ಯದಲ್ಲಿ ಅಕ್ಷರ ದೋಷಗಳಿಲ್ಲದಿರಲಿ.ಧನ್ಯವಾದಗಳು.

Chethan Narayana Murthy said...

ತುಂಬಾ ಧನ್ಯವಾದಗಳು. ದೋಷವೇನೆಂದು ತಿಳಿಯಲಿಲ್ಲ :(
ನಿಮಗೇನಾದರೂ ಕಂಡರೆ ತಿಳಿಸಿ, ತಪ್ಪಿಲ್ಲ...

Sowmya Priya said...

this is one of my fav songs. my mom sings the song beautifully

Chethan Narayana Murthy said...

Gud to know Priya, ur mom will hav to sing it for me some time!