ಆರದಿರಲಿ ಬೆಳಕೂ...
ಕಡಲೂ ನಿನ್ನದೇ, ಹಡಗೂ ನಿನ್ನದೇ
ಮುಳುಗದಿರಲಿ ಬದುಕೂ...
ಬೆಟ್ಟವು ನಿನ್ನದೇ, ಬಯಲೂ ನಿನ್ನದೇ
ಹಬ್ಬಿನದಲಿ ಪ್ರೀತಿ...
ನೆಳಲೋ ಬಿಸಿಲೂ ಎಲ್ಲವು ನಿನ್ನವೇ
ಇರಲಿ ಏಕ ರೀತಿ...
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ...
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನನಗೆ ನಮಸ್ಕಾರ...
ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿ ಧ್ವನಿ...
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದ ಧ್ವನಿ...
- ರಚನೆ : ಕೆ. ಎಸ್. ನರಸಿಂಹ ಸ್ವಾಮಿ
No comments:
Post a Comment