Thursday, November 1, 2012

ninneDege baruvaaga


ಭಗವಂತನ ಪ್ರೀತಿಗೆ ಪಾತ್ರನಾಗಿ ತನ್ನನು ತಾನೇ ಅವನಲ್ಲಿ ಅರ್ಪಿಸಿಕೊಳ್ಳಲು ಕಾತರವಾಗಿರುವ ಜೀವವೊಂದರ ಹೃದಯದ ಮಾತುಗಳು ಕವಿಯ ಕಲ್ಪನೆಯ ಮಾತುಗಳಲ್ಲಿ ಹೊರಬಂದಿರುವುದು ಇಂತು:

ನಿನ್ನೆಡೆಗೆ ಬರುವಾಗ, ಸಿಂಗರದ ಹೊರೆಯೀಕೆ;
ಸಡಗರದ ಮಾತುಗಳ ಬಿಂಕವೇಕೆ;
ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ;
ಸಂಪ್ರದಾಯದ ಮರುಳ ಲಜ್ಜೆಯೇಕೆ ;

ನೇಪುರದ ಗೆಜ್ಜೆಗಳ ಕಿಂಕಿಣಿಯ ದನಿ;
ನಿನ್ನ ಸವಿಗೊರಳಿನಿಂಚರವ ಕೆಡಿಸದಿರಲಿ;
ಮಂತ್ರಗಳ ಜವನಿಕೆಯು ದೊರೆ ನಿನ್ನ;
ಸಿರಿ ಮೈಯ್ಯ ಸೌಂದರ್ಯವನು ಮುಪ್ಪುಗಯ್ಯದಿರಲಿ;

ನಗ್ನತೆಗೆ ನಾಚದೆಯೆ ಸಿರಿ ತಳಿರ ತೆಕ್ಕೆಯಿಂ;
ಮೂಡಿ ಸುಗ್ಗಿಯನುಲಿವ ಹೂವಿನಂತೆ;
ಸಿಂಗರದ ಹೊರೆಯುಳಿದು; ಮಂತ್ರಗಳ ಮೊರೆಯುಳಿದು;
ಪ್ರೇಮದಾರತಿ ಹಿಡಿದು ತೇಲಿ ಬಂದೆ.

- ರಚನೆ: ಕುವೆಂಪು

No comments: