ಮಿಡುಕಾಡುತಿರುವೆ ನಾನು
ತಡಿಯಲೊಲ್ಲೇ ನೀ ಕರುಳಬಳ್ಳಿ,
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ
ನಾ ಕಲಿವೆ ಊರ್ಧ್ವಗಮನ
ಓ ಅಗಾಧ ಗಗನ
ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ, ಮೂರ್ತ ಪ್ರೇಮದೆಡೆಗೆ
- ರಚನೆ: ಬಿ. ಆರ್. ಲಕ್ಷ್ಮಣ್ ರಾವ್
2 comments:
ಸಂದೇಹ ಅಷ್ಟೆ: ಇದು ಹೆಚ್.ಎಸ್.ವಿ ಅವರ ಕವನ ಅಲ್ವಾ?
ಇದು ಬಿ.ಆರ್ ಅವರ ರಚನೆ. ನಿಮ್ಮ ಸಂದೇಹಕ್ಕೆ ಕಾರಣ "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" ಇರಬಹುದು ... ಇದು ಹೆಚ್.ಎಸ.ವಿ ಅವರ ರಚನೆ.
Post a Comment