Friday, May 13, 2011

Muchhu-mare illadeye

ಪ್ರಾಪಂಚಿಕ ಬದುಕಿನಲ್ಲಿ ನಾವು ಹಲವೊಮ್ಮೆ ನಮಗರಿವಿದ್ದೋ ಇಲ್ಲದೆಯೋ ಹಲವಾರು ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳುತ್ತೇವೆ. ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಡಲು ಮರೆಯುತ್ತೇವೆ. ಪ್ರಶಾಂತವಾದ ಮನಸ್ಸಿನಿಂದ ಮತ್ತೊಮ್ಮೆ ನಮ್ಮ ದಿನವನ್ನು ಅವಲೋಕಿಸಿದರೆ ನಮ್ಮ ಅಹಿತಕರ ವರ್ತನೆಗಳು ನಮ್ಮನ್ನು ಕಾಡಬಹುದು. ಆದರೆ ತಪ್ಪು ಮಾಡುವುದು ಮಾನವನ ಸಹಜ ಗುಣ, ಅದನ್ನರಿತು ಆ ದಿವ್ಯ ಚೇತನನಲ್ಲಿ ದೀನನಾಗಬಯಸುವ ಹೃದಯವೊಂದರ ಪಿಸು ಮಾತು, ಈ ಪುಟ್ಟ ಹಾಡು. 


ಮುಚ್ಚು ಮರೆ ಇಲ್ಲದೆಯೆ, ನಿನ್ನ ಮುಂದೆಲ್ಲವನು;
ಬಿಚ್ಚಿಡುವೆ ಓ ಗುರುವೇ, ಅಂತರಾತ್ಮ ;
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ;
ಸ್ವೀಕರಿಸು ಓ ಗುರುವೇ, ಅಂತರಾತ್ಮ;

ರವಿಗೆ ಕಾಂತಿಯನೀವ, ನಿನ್ನ ಕಣ್ಣೀಕ್ಷಿಸ್ಸಲು;
ಪಾಪ ತಾನುಳಿಯುವುದೇ ಪಾಪವಾಗಿ;
ಗಂಗೆ ತಾನೂದ್ಭವಿಪ, ನಿನ್ನಡಿಯ ಸೋಂಕಿಂಗೆ;
ನರಕತಾನುಳಿಯುವುದೇ ನರಕವಾಗಿ.

ಶಾಂತರೀತಿಯ ನೆಮ್ಮಿ, ಕದಡಿರುವುದೆನ್ನಾತ್ಮ ;
ನಾಂತ ರೀತಿಯು ಅದೆಂತೋ ಓ ಅನಂತಾ;
ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ;
ನಿನ್ನ ಪ್ರೀತಿಯ ಬೆಳಕಿನ ಆನಂದ ಪೈರ್;

- ರಚನೆ : ಕುವೆಂಪು